
ಯಲ್ಲಾಪುರ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ತಕ್ತಿಯ ಮೇಲೆ ಚಿರತೆಯೊಂದ ದಾಳಿ ಮಾಡಿ ಗಂಭೀರವಾಗಿ ಗಾಯಮಾಡಿರುವ ಘಟನೆ ತಾಲೂಕಿನ ಚನ್ನೆಹುಕ್ಕಳಿ ಬಳಿ ನಡೆದಿದೆ. ತನ್ನ ಅಡಿಕೆ ತೋಟದಲ್ಲಿ ರೈತ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಏಕಿ ತೋಟಕ್ಕೆ ಬಂದ ಚಿರತೆ ರೈತನ ಮೇಲೇರಗಿ, ತಲೆ, ಮುಖಕ್ಕೆ ಪರಚಿ ಗಾಯಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಅಪ್ಪಿ ಬಾಬು ಮರಾಠಿ ಎಂದು ತಿಳಿದುಬಂದಿದೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ