
ಭಟ್ಕಳ: ತಾಲೂಕಿನ ಮುರುಡೇಶ್ವರದ ಹೊಟೆಲ್ ಹತ್ತಿರ ಗಲಾಟೆ ನಡೆಯುತ್ತಿತ್ತು. ಈ ಕುರಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಗಲಾಟೆ ಮಾಡದಂತೆ ಸೂಚಿಸಿದ ಪೊಲೀಸರನ್ನು ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ತಾಲೂಕಿನ ಮಾವಳ್ಳಿಯ ಕಿಸಗಾರಮಕ್ಕಿ ಖಂಡಕ ನಿವಾಸಿ ಗಣೇಶ ಈಶ್ವರ ನಾಯ್ಕ ಹಾಗೂ ದಿನೇಶ ತಂದೆ ಹನುಮಂತ ನಾಯ್ಕ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮುರುಡೇಶ್ವರ ಠಾಣಾ ಪೊಲೀಸ್ ಕಾನ್‌ಸ್ಟೇಬಲ್ ಕಿರಣ ತಂದೆ ಗಣಪತಿ ತಿಳಗಂಜಿ ದೂರು ದಾಖಲಿಸಿದ್ದಾರೆ. ಎಸೈ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು