Uttara Kannada
Trending

ಆರ್. ಎನ್ ನಾಯಕ ಸಂಜೀವಿನಿ ಹೆಲ್ತ್ ಕಾರ್ಡ್ ಬಿಡುಗಡೆಗೊಳಿಸಿದ ರೂಪಾಲಿ ನಾಯ್ಕ

ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯ
ಸೇವಾಶುಲ್ಕಗಳಲ್ಲಿ ಶೇಕಡಾ 5% ರಿಯಾಯತಿ
ದ್ವಾರಕಾ ಬ್ಯಾಂಕ್ ಎಲ್ಲಾ ಶಾಖೆಯಲ್ಲಿ ಉಚಿತ ವಿತರಣೆ
ಜನತೆಯ ಆರೋಗ್ಯ ಸೇವೆಯೇ ಗುರಿ

ಅಂಕೋಲಾ : ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದ್ದ ಕಮಲಾ ಮೆಡಿಕಲ್, ಜೂನ್ 1 ರಿಂದ ಸ್ಥಳೀಯ ಯುವ ಉದ್ಯಮಿ ಮಯೂರ್ ನಾಯಕ ಸಹಭಾಗಿತ್ವದಲ್ಲಿ ಹೊಸ ರೂಪ ಪಡೆದು ಡಾ. ಕಮಲಾ ಮತ್ತು ಆರ್. ಎನ್. ನಾಯಕ ಹಾಸ್ಪಿಟಲ್ ಎಂಬ ಮರು ನಾಮಕರಣದೊಂದಿಗೆ ಜನತೆಯ ಆರೋಗ್ಯ ಸೇವೆಗೆ ತೆರೆದುಕೊಂಡಿದೆ.
ಕೆ.ಸಿ ರಸ್ತೆಯ ಕುಬೇರ ಕಟ್ಟಡದಲ್ಲಿರುವ ಜಯಲಕ್ಷ್ಮೀ ಮಹಿಳಾ ಬ್ಯಾಂಕಿನಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, “ಆರ್. ಎನ್ ನಾಯಕ ಸಂಜೀವಿನಿ” ಆರೋಗ್ಯ ಕಾರ್ಡ ಬಿಡುಗಡೆಗೊಳಿಸಿದರು. ತನ್ನ ಮತಕ್ಷೇತ್ರ ವ್ಯಾಪ್ತಿಯ ಅಂಕೋಲಾದಲ್ಲಿ ಜನರ ಆರೋಗ್ಯ ಸಮಸ್ಯೆಗಳಿಗೆ ಈ ಕಾರ್ಡ್ ಉಪಯೋಗ ದೊರೆಯಲಿ ಎಂದು ಹೇಳಿ ನೂತನ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಶುಭ ಹಾರೈಸಿದ ಶಾಸಕಿ ರೂಪಾಲಿ ನಾಯ್ಕ, ತಂದೆಯ ಆದರ್ಶದಲ್ಲಿ ಮುನ್ನಡೆಯುತ್ತಿರುವ ಮಯೂರ ನಾಯಕರ ಸೇವಾ ಕಾರ್ಯವನ್ನು ಮೆಚ್ಚಿ ಮಾತನಾಡಿದರು.

ದ್ವಾರಕಾ ಬ್ಯಾಂಕ್‌ವತಿಯಿಂದ ಕಾರ್ಡಗಳನ್ನು ಎಲ್ಲಾ ಶಾಖೆಗಳಲ್ಲಿಯೂ ಉಚಿತವಾಗಿ ವಿತರಿಸಲಾಗುತ್ತದೆ. ಕಾರ್ಡ ಪಡೆದುಕೊಂಡು ಆಸ್ಪತ್ರೆಗೆ ಬರುವ ಒಳ ಮತ್ತು ಹೊರರೋಗಿಗಳಿಗೆ, ತಪಾಸಣೆ, ಲ್ಯಾಬ್, ಔಷದ, ಆಂಬ್ಯುಲೆನ್ಸ್ ಮತ್ತು ವಿವಿಧ ಚಿಕಿತ್ಸೆ ಹಾಗೂ ಸೇವಾಶುಲ್ಕಗಳಲ್ಲಿ ಶೇಕಡಾ 5% ರಿಯಾಯತಿ ದೊರೆಯಲಿದೆ .

-ಮಯೂರ ನಾಯಕ, ಆಸ್ಪತ್ರೆಯ ಆಡಳಿತ ಪ್ರಮುಖರು ಮತ್ತು ಯುವ ಉದ್ಯಮಿಗಳು

ಸಂಜೀವ ನಾಯ್ಕ ಭಾವಿಕೇರಿ ಸ್ವಾಗತಿಸಿದರು. ಜಗದೀಶ ನಾಯಕ ಮೊಗಟಾ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಮುಖರಾದ ಆರ್.ಟಿ ಮಿರಾಶಿ, ಭಾಸ್ಕರ ನಾರ್ವೇಕರ ಉಪಸ್ಥಿತರಿದ್ದರು. ರಾಜಶ್ರೀ ನಾಯಕ, ವೀಣಾ ನಾಯ್ಕ ಮತ್ತು ಬ್ಯಾಂಕ ಸಿಬ್ಬಂದಿಗಳು, ಹರೀಶ ನಾಯಕ, ಪ್ರವೀಣ ನಾಯ್ಕ, ಮತ್ತು ಹಿತೈಷಿಗಳು, ಆಪ್ತರು ಪಾಲ್ಗೊಂಡಿದ್ದರು.

ಬಹು ವಿಸ್ತಾರವಾಗಿರುವ ಈ ಆಸ್ಪತ್ರೆಯಲ್ಲಿ ಹತ್ತಾರು ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು, ರಕ್ತನಿಧಿ ಕೇಂದ್ರ, ವ್ಯವಸ್ಥಿತ ನಾಲ್ಕು ಆಪರೇಶನ್ ಥಿಯೇಟರ್, ವಿಶೇಷ ಐ.ಸಿ.ಯು ಕೋಣೆಗಳು ಸೇರಿದಂತೆ ಹಲವು ಉತ್ತಮ ಸೌಲಭ್ಯಗಳಿದ್ದೂ, ಪೂರ್ಣಪ್ರಮಾಣದಲ್ಲಿ ತಜ್ಞ ವೈಧ್ಯರ ಸೇವಾ ಅಲಭ್ಯತೆ, ಆಸ್ಪತ್ರೆಗೆ ಸ್ಥಳೀಯವಾಗಿ ಆದಾಯದ ಕೊರತೆ, ಮತ್ತಿತ್ತರ ಕಾರಣಗಳಿಂದ ಈ ಹಿಂದಿನ ಕಮಲಾ ಆಸ್ಪತ್ರೆಯು ನಿರೀಕ್ಷೀತ ಮಟ್ಟದ ಸೇವೆ ನೀಡಲು ಸಾದ್ಯವಾಗಿರಲಿಲ್ಲ ಎಂಬ ಭಾವನೆ ಹಲವರದಾಗಿದ್ದು, ಮಯೂರ ನಾಯಕ ವಿಶೇಷ ಕಾಳಜಿ ಮತ್ತು ಕಳಕಳಿಯಿಂದ ಜನತೆಯ ಆರೋಗ್ಯ ಸಮಸ್ಯೆಗೆ ಸ್ಪಂದಿಸುವಂತಾಗಲಿ ಎನ್ನುವುದು ಬಹುತೇಕ ಅಂಕೋಲಿಗರ ಆಶಯವಾಗಿದೆ.

-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button