ಭಟ್ಕಳ - 16?
ಹೊನ್ನಾವರ - 5?
ಅಂಕೋಲಾ - 6?
ಕಾರವಾರ:ಉತ್ತರಕನ್ನಡದಲ್ಲಿ ಇಂದು ಕರೊನಾ ಮತ್ತೆ ಅಬ್ಬರಿಸಿದ್ದು, 34 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಹೊನ್ನಾವರ ತಾಲ್ಲೂಕಿನ ಗೇರುಸೋಪ್ಪಾ ಮೂಲದ ಒಂದೇ ಕುಟುಂಬದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲ ಮಹಾರಾಷ್ಟ್ರ ದಿಂದ ಆಗಮಿಸಿ ಖಾಸಗಿ ಹೊಟೇಲ್ನಲ್ಲಿ ಕ್ವಾರಂಟೈನಗೆ ಒಳಗಾಗಿದ್ದರು. ಒಂದೇ ಕುಟುಂಬದ ಮೂವರ ಪೈಕಿ ತಾಯಿ ಮಗುವಿನ ವರದಿ ಪಾಸಿಟಿವ್ ಬಂದಿದ್ದು, ಇನ್ನು ಪುರುಷನ ವರದಿ ಬರಬೇಕಿದೆ.
ಹಾಗೂ ಹಳದೀಪುರ ಮೂಲದ ಒಂದೆ ಕುಟುಂಬದ ಸದಸ್ಯರ ನಾಲ್ವರ ಪೈಕಿ ತಾಯಿ ಮತ್ತು ಎರಡು ಮಕ್ಕಳ ಮೂವರ ವರದಿ ಪಾಸಿಟಿವ ಬಂದಿದೆ. ಇಲ್ಲೂ ಕೂಡಾ ಪುರುಷನ ವರದಿ ಇನ್ನು ಬಾಕಿ ಉಳಿದಿದೆ. ಇದೇ ವೇಳೆ ಭಟ್ಕಳದಲ್ಲಿ ಅತಿಹೆಚ್ಚು 16, ಶಿರಸಿಯಲ್ಲಿ 5 ಅಂಕೋಲಾದಲ್ಲಿ 6 ಪ್ರಕರಣ ದೃಢಪಟ್ಟಿ ಎಂಬ ಮಾಹಿತಿ ಕೇಳಿಬಂದಿದೆ.
ಶಿರಸಿಯಲ್ಲಿ ದ್ವಿಚಕ್ರವಾಹನ ಕಳ್ಳತನದ ಆರೋಪಿಯ ಸಂಪರ್ಕಕ್ಕೆ ಬಂದ ಮೂವರು ಖೈದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಅಗ್ರಗೋಣ-ಶೇಡಿಕಟ್ಟಾ ಭಾಗದಲ್ಲಿ ಕಾಣಿಸಿಕೊಂಡ ಸೋಂಕಿನ ನಂಜು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದ ಬೀಟ್ ಪೋಲೀಸನೋರ್ವನಿಗೂ ಕೋವೀಡ್-19 ವೈರಸ್ ವಕ್ಕರಿಸಿರುವ ಸಾಧ್ಯತೆ ಧೃಡವಾಗಿದೆ ಎನ್ನಲಾಗಿದೆ. ಆತನ ಗಂಟಲುದ್ರವ್ವನ್ನು ಪರೀಕ್ಷೆಗೆ ಕಳುಹಿಸಿ ಪೋಲೀಸ್ ಪೇದೆಯನ್ನು ಕ್ವಾರೆಂಟೈನ್ನಲ್ಲಿ ಇಡಲಾಗಿತ್ತು ಎನ್ನಲಾಗಿದ್ದು, ಆರೋಗ್ಯ ಇಲಾಖೆಯ ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಈ ಬಗ್ಗೆ ದೃಢಪಡಲಿದೆ ಎನ್ನಲಾಗಿದೆ.