ಹೊನ್ನಾವರ: ತಾಲೂಕಿನ ಮಾಡಗೇರಿ ಮೂಲದ ವಿದ್ಯಾರ್ಥಿ ಅಮೆರಿಕಾದಲ್ಲಿ ಸಾಧನೆ ಮಾಡಿದ್ದಾನೆ. ಹೌದು, ಮಾಡಗೇರಿ ಮೂಲದ ಚೈತನ್ಯ ಭಟ್ ಗೆ ಅಮೆರಿಕ ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಿಂದ PHD ಪದವಿ ದೊರೆತಿದೆ.
ಇವರು ರಸ್ತೆ ನಿರ್ಮಾಣ ಹಾಗೂ ಕಾಮಗಾರಿಯಿಂದ ಆಗುವ ಹವಾಮಾನ ವ್ಯತ್ಯಾಸಗಳ ಅಧ್ಯಯನ ಹಾಗೂ ಅನಿಶ್ಚಿತತೆಯನ್ನು ಒಳಗೊಂಡ ಪ್ರದೂಷಣವನ್ನು ಕಡಿಮೆ ಮಾಡುವ ವಿಧಾನದ ಬಗ್ಗೆ ಡಾ. ಅಮ್ಲಾನ್ ಮುಖರ್ಜಿ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ್ದರು.
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿರುವ ಚೈತನ್ಯ ಭಟ್, ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್ ಪದವಿ ಪೂರೈಸಿದ್ದಾರೆ.
ಚೈತನ್ಯ ಭಟ್ , ಮಾಡಗೇರಿ ಮೂಲದ ಸದ್ಯ ಧಾರವಾಡ ನಿವಾಸಿಯಾಗಿರುವ ಖ್ಯಾತ ಸಿವಿಲ್ ಇಂಜಿನಿಯರ್ ಹಾಗೂ ಬಿಲ್ಡರ್ ಗಣೇಶ ಭಟ್ ಹಾಗೂ ವಿದ್ಯಾ ಭಟ್ ದಂಪತಿಯ ಪುತ್ರ. ಗಣೇಶ ಭಟ್ ಇವರು, ರೋಟರಿ ಇಂಟರನ್ಯಾಷನಲ್ ಜಿಲ್ಲಾ ಮಾಜಿ ಗವರ್ನರ್, ಹಾಲಿ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಎಕ್ಸಿಕ್ಯುಟಿವ್ ಕಮಿಟಿ ಸದಸ್ಯರಾಗಿದ್ದಾರೆ.
ವಿಸ್ಮಯ ನ್ಯೂಸ್ ಹೊನ್ನಾವರ