ಮಾಹಿತಿ
Trending

ಕೋವಿಡ್ ನಿಂದ ಮೃತನಾದ ಮತ್ತೋರ್ವ ಅಂಕೋಲಿಗ : 10ಕ್ಕೆ ಏರಿದ ಮೃತರ ಸಂಖ್ಯೆ

  • ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಸಾಮಾಜಿಕ ಕಾರ್ಯಕರ್ತರು
  • ಮಾಜಿ ಶಾಸಕ ಸೈಲ್‍ರಿಂದಲೂ ಸಹಕಾರ

ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಯಾವುದೇ ಹೊಸ ಕೋವಿಡ್ ಕೇಸ್‍ಗಳು ಪತ್ತೆಯಾಗಿಲ್ಲ ವಾದರೂ, ಕಾರವಾರದ ಕ್ರಿಮ್ಸ್‍ನ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದ ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ 54ರ ಪುರುಷನೊರ್ವ ಮೃತಪಟ್ಟಿದ್ದಾನೆ. ಈ ಮೂಲಕ ತಾಲೂಕಿನಲ್ಲಿ ಈವರೆಗೆ ಕೋವಿಡ್‍ನಿಂದ ಮೃತರಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮೃತ ಪುರಷನು ಟ್ರಾನ್ಸ್‍ಪೋರ್ಟ್ ಮತ್ತಿತರ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಡಿ.9 ರಂದು ಕಾರವಾರದ ಕ್ರಿಮ್ಸ್‍ಗೆ ದಾಖಲಾಗಿದ್ದು, ಆತನ ಪತ್ನಿ ಮತ್ತು ತಾಯಿಯಲ್ಲಿಯೂ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿತ್ತು ಎನ್ನಲಾಗಿದೆ.

ಮೃತನಲ್ಲಿ ಸಕ್ಕರೆ ಕಾಯಿಲೆ ಗುಣಲಕ್ಷಣಗಳಿದ್ದು, ಆಸ್ಪತ್ರೆಗೆ ತಡವಾಗಿ ದಾಖಲಾಗಿದ್ದರಿಂದ ಸೋಂಕು ಲಕ್ಷಣಗಳು ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಕಾರಣವಾಯಿತು ಎನ್ನಲಾಗಿದೆ.

ಕಾರವಾರದ ಆಸ್ಪತ್ರೆಯಿಂದ ಮೃತ ದೇಹ ಸಾಗಿಸುವವರೆಗೆ ತಮ್ಮದೇ ಆದ ವಿಶೇಷ ಕಾಳಜಿ ತೋರಿಸಿದ್ದ ಮಾಜಿ ಶಾಸಕ ಸೈಲ್, ಸ್ಥಳೀಯರು ಅಲಭ್ಯರಾದರೆ ಕಾರವಾರದ ಕೆಲವರನ್ನು ಕರೆಯಿಸಿ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದರು. ಈ ವೇಳೆಗಾಗಲೇ ಅಂಕೋಲಾದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದು ‘ವಿಜಯ’ದ ನಗೆ ಬಿರುವ ನಾಯಕ ಮತ್ತು ಆತನ ತಂಡದವರು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿ ಮಾದರಿಯಾದರು. ಸ್ಥಳೀಯರು ಮತ್ತು ಕೊರೊನಾ ವಾರಿಯರ್ಸ್‍ಗೆ ಸಂಬಂಧಿಸಿದ ವಿವಿಧ ಇಲಾಖೆಯವರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button