Uttara Kannada
Trending

ಬೈಕ್ ತಪ್ಪಿಸಲು ಹೋಗಿ ಗ್ಯಾಸ್ ಟ್ಯಾಂಕರ್ ಪಲ್ಟಿ : ಇಬ್ಬರ ಸ್ಥಿತಿ ಗಂಭೀರ

ಭಟ್ಕಳ: ತಾಲೂಕಿನ ಪುರವರ್ಗ ಗಣೇಶ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಚಾಲಕ ಆಕ್ಟಿವ್ ಸ್ಕೂಟಿ ತಪ್ಪಿಸಲು ಹೋಗಿ  ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಬುಧವಾರದಂದು ಸಂಜೆ ನಡೆದಿದೆ.

ಹುಬ್ಬಳ್ಳಿ ದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹಿಂದುಸ್ಥಾನ ಪೆಟ್ರೋಲಿಯಂ ಟ್ಯಾಂಕರನ ಚಾಲಕ ತನ್ನ‌ ಎದುರಿಗೆ ಶಿರೂರಿನಿಂದ ಮಂಕಿ ಕಡೆಗೆ ತೆರಳುತ್ತಿದ್ದ ಹೋಂಡಾ ಆಕ್ಟಿವ್ ಸ್ಕೂಟಿಯನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ  ಗ್ಯಾಸ್ ಟ್ಯಾಂಕರ ನಿಯಂತ್ರಣ  ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಪಲ್ಟಿಯಾಗಿದೆ. 

ಅದ್ರಷ್ಟವಶಾತ್ ಟ್ಯಾಂಕರ್‌ ಖಾಲಿ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲದಿರುವುದು ಜನರಿಗೆ ಸಮಾಧಾನಕರವಾಗಿದ್ದರೂ, ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.ಅಪಘಾತದಲ್ಲಿ ತಮಿಳುನಾಡು ಮೂಲದ  ಲಾರಿ ಚಾಲಕ ಮಂಜುನಾಥ (50) ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ಸಾಗಿಸಲಾಯಿತು.

ಅತ್ತ ಆಕ್ಟಿವ್ ಸ್ಕೂಟಿನಲ್ಲಿದ್ದ ಇಬ್ಬರು ಸವಾರರು ಸ್ಕೂಟಿ ಸಮೇತ ಟ್ಯಾಂಕರ ಎದುರಿಗೆ ಪಲ್ಟಿಯಾಗಿ ಬಿದ್ದಿದ್ದಾರೆ. ಬೈಕ ಸವಾರ ಸಮ್ಮುನ್ ಇಮ್ತಿಯಾಜ್ ಬೈಲೂರಕರ್ (32) ಗಾಯಗೊಂಡಿದ್ದು, ತಾಯಿ ಖಾತುನ್ ಇಮ್ತಿಯಾಜ್  ಬೈಲೂರಕರ್ (58) ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಸ್ಥಿತಿ ಗಂಭೀರವಾಗಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅಂಬ್ಯುಲೆನ್ಸ ಮೂಲಕ ಸಾಗಿಸಲಾಗಿದೆ‌.
ಅಪಘಾತ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿ ಶಾಮಕ ಅಧಿಕಾರಿ, ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ಕೈಗೊಂಡಿದ್ದಾರೆ‌.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button