Uttara Kannada
Trending

ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸದ್ಯಕ್ಕಿಲ್ಲ ದರ್ಶನ

ಹೊನ್ನಾವರ: ಕರೊನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಜಾರಿಯಾದ ಬಳಿಕ ಸರ್ಕಾರದ ಆದೇಶದಂತೆ ದೇವಾಲಯಗಳಲ್ಲಿ ಸಾರ್ವಜನಿಕ ದರ್ಶನ ವಿಶೇಷ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಇದರಂತೆ ತಾಲೂಕಿನ ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳಾಗಲಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರಲ್ಲಿಲ. ಜೂನ್ 8ರಂದು ಸರ್ಕಾರದ ಮಾರ್ಗಸೂಚಿಯ ಅನ್ವಯ ದೇವಾಲಯಗಳು ತೆರೆದು ಸುರಕ್ಷತಾ ಕ್ರಮ ಕೈಗೊಂಡು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಆದರೆ ಶ್ರೀಕ್ಷೇತ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಸ್ಥಳವಕಾಶದ ಸಮಸ್ಯೆ, ಹಾಗೂ ಕಾರ್ಯನಿರ್ವಹಿಸಲು ಸಿಬ್ಬಂದಿಗಳ ಅಭಾವ, ಅರ್ಚಕರ ಸುರಕ್ಷತಾ ದೃಷ್ಟಿಯಿಂದ ದೇವಾಲಯದಲ್ಲಿ ಇನ್ನು ಕೆಲ ದಿನಗಳ ಕಾಲ ದರ್ಶನವಾಗಲಿ, ಅಥವಾ ವಿಶೇಷ ಪೂಜೆಗೆ ಅವಕಶವಿಲ್ಲ ಎಂದು ಮಾಧ್ಯಮದ ಮೂಲಕ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಮುಂದಿನ ದಿನಾಂಕವನ್ನು ತಿಳಿಸುವವರೆಗೆ ದೇವಾಲಯಕ್ಕೆ ಆಗಮಿಬಾರದು ಎಂದು ವಿಂತಿಸಿಕೊಂಡಿದ್ದಾರೆ.

ತಿ ಪುರಾತನ ಕ್ಷೇತ್ರವಾಗಿರುದರಿಂದ ನಮ್ಮಲ್ಲಿ ವಿವಿಧಡೆಯಿಂದ ಭಕ್ತರು ಆಗಮಿಸುತ್ತಾರೆ. ಎಲ್ಲರ ಹಿತದೃಷ್ಟಿಯನ್ನು ಮನ್ನಿಸಿ ಇನ್ನು ಕೆಲವು ದಿನಗಳ ಕಾಲ ದೇವಾಲಯಕ್ಕೆ ಸಾರ್ವಜನಿಕರ ದರ್ಶನವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.
-ಸುಬ್ರಾಯ ತಿಮ್ಮಣ್ಣ ಹೆಗಡೆ, ದೇವಾಲಯದ ಮುಖ್ಯಟ್ರಸ್ಟಿ

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಹೆಗಡೆ ಮಾತನಾಡಿ ಕಳೆದ ಮೂರು ತಿಂಗಳಿನಿಂದ ದೇವಾಲಯ ಬಂದ್ ಮಾಡಲಾಗಿತ್ತು. ಈಗ ಆರಂಭಿಸಲು ಸರ್ಕಾರದ ಆದೇಶವನ್ನು ನಾವು ಪಾಲಿಸಲು ಸಮಸ್ಯೆಯಾಗುತ್ತಿದೆ. ನಮ್ಮಲ್ಲಿ ಸಿಬ್ಬಂದಿಗಳ ಅಭಾವ ಹಾಗೂ ಸ್ಥಳದ ಸಮಸ್ಯೆಯಿಂದ ಇನ್ನು ಕೆಲವು ದಿನಗಳ ದರ್ಶನವಾಗಲಿ ವಿಶೇಷ ಸೇವೆಯಾಗಲಿ ದೇವಾಲಯದಲ್ಲಿ ನಡೆಯುದಿಲ್ಲ. ನಾಡಿನ ವಿವಿಧಡೆಯಿಂದ ಭಕ್ತರು ಬರುವುದರಿಂದ ದೇವಾಲಯಕ್ಕೆ ಕೆಲಸಕ್ಕೆ ಬರುವವರು ಭಯಪಡುತ್ತಾರೆ. ಇದೆಲ್ಲವನ್ನು ಗಮನಿಸಿಯೇ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಮುಂದೆ ದೇವಾಲಯದ ಕಾರ್ಯಕ್ರಮ ಪ್ರಾರಂಭವಾಗುವ ದಿನವನ್ನು ಮಾಧ್ಯಮದ ಮೂಲಕ ತಿಳಿಸಲಾಗುವುದು. ಕರೋನಾ ಶಿಘ್ರ ಗುಣಮುಖವಾಗಲಿ ದೇವಾಲಯದಲ್ಲಿ ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದು, ಭಕ್ತರು ಅವರ ಮನೆಯಲ್ಲಿಯೇ ಸ್ಮರಿಸುವಂತೆ ಮನವಿ ಮಾಡಿದರು.
ಟ್ರಸ್ಟ ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ ಕೊಂಡದಕೇರಿ ಮಾತನಾಡಿ ದೇವಾಲಯವನ್ನು ಆರಂಭಿಸಲು ಸರ್ಕಾರ ಹಲವು ನಿರ್ದೆಶನ ನೀಡಿದ್ದು ಅದನ್ನು ಈಗ ನಮ್ಮ ದೇವಾಲಯದಲ್ಲಿ ಪ್ರಾರಂಭ ಮಾಡಲು ಸಾಧ್ಯವಿಲ್ಲದ ಕಾರಣ ಸದ್ಯದ ಮಟ್ಟಿಗೆ ದೇವಾಲಯದ ದರ್ಶನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಭಕ್ತರು ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಸತ್ಯನಾರಾಯಣ ಹೆಗಡೆ ತೋಟಿ, ಸದಸ್ಯ ನಾರಾಯಣ ಹೆಗಡೆ ಉಪಸ್ಥಿತರಿದ್ದರು.
-ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button