ಕುಮಟಾದಲ್ಲಿ 14, ಹೊನ್ನಾವರದಲ್ಲಿ 15 ಕರೊನಾ ಕೇಸ್

ಕುಮಟಾದಲ್ಲಿ ಇಂದು 15 ಸೋಂಕಿತರು ಪತ್ತೆ
ಕೊಡ್ಕಣಿಯಲ್ಲಿ 4 ಕೇಸ್, ಕಲಭಾಗದಲ್ಲಿ 3 ಪ್ರಕರಣ
ಕಾಸರಕೋಡಿನ ಟೊಂಕದಲ್ಲೇ 14 ಕೇಸ್

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 14 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ©Copyright reserved by Vismaya tv ಇಂದು ದಾಖಲಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ ಕುಮಟಾ ತಾಲೂಕಿನ ಕೊಡ್ಕಣಿಯಲ್ಲಿ 4 ಪ್ರಕರಣ, ಕಲಭಾಗನಲ್ಲಿ 3 ಪ್ರಕರಣ ಹಾಗೂ ಸಂತೇಗುಳಿ, ಅಳ್ವೆದಂಡೆ, ಹಳಕಾರ, ಹೊನ್ಮಾವ್ ಮುಂತಾದ ಪ್ರದೇಶದಲ್ಲಿ ತಲಾ ಒಂದೊಂದು ಸೋಂಕಿತ ಪ್ರಕರಣ ಕಂಡುಬಂದಿದೆ.

ಕೊಡ್ಕಣಿಯ 34 ವರ್ಷದ ಪುರುಷ, ಕೊಡ್ಕಣಿಯ 45 ವರ್ಷದ ಪುರುಷ, ಕೊಡ್ಕಣಿಯ 35 ವರ್ಷದ ಮಹಿಳೆ, ಕೊಡ್ಕಣಿಯ 18 ವರ್ಷದ ಮಹಿಳೆ, ಕಲಭಾಗ್‍ನ 10 ವರ್ಷದ ಬಾಲಕಿ, ಕಲಭಾಗ್‍ನ 72 ವರ್ಷದ ವೃದ್ಧ, ಕಲಭಾಗ್‍ನ 61 ವರ್ಷದ ಮಹಿಳೆ, ಕುಮಟಾದ 34 ವರ್ಷದ ಪುರುಷ, 62 ವರ್ಷದ ಪುರುಷ, 60 ವರ್ಷದ ಮಹಿಳೆ, ಹೊನ್ಮಾವಿನ 45 ವರ್ಷದ ಮಹಿಳೆ, ಹಳಕಾರದ 19 ವರ್ಷದ ಬಾಲಕ, ಅಳ್ವೆದಂಡೆಯ 51 ವರ್ಷದ ಪುರುಷ, ಸಂತೇಗುಳಿಯ 24 ವರ್ಷದ ಮಹಿಳೆಯಲ್ಲಿ ಸೋಂಕು ತಗುಲಿದೆ ಎನ್ನಲಾಗಿದೆ. ಈ 14 ಜನರು ಕೂಡ ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎಂಬ ಮಾಹಿತಿ ದೊರೆತಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

ಹೊನ್ನಾವರದಲ್ಲಿ 15 ಕೇಸ್ ದಾಖಲು:

ಹೊನ್ನಾವರ: ತಾಲೂಕಿನಲ್ಲಿ ಇಂದು 15 ಕರೊನಾ ಪ್ರಕರಣ ದಾಖಲಾಗಿದ್ದು, ಕಾಸರಕೋಡಿನ ಟೊಂಕ ಭಾಗದಲ್ಲಿ ಅತಿಹೆಚ್ಚು ಕೇಸ್ ಕಂಡುಬಂದಿದೆ. ಟೋಂಕದಲ್ಲೇ 14 ಪಾಸಿಟಿಸ್ ಬಂದಿದೆ.

©Copyright reserved by Vismaya tv ಟೊಂಕದ 25 ವರ್ಷದ ಮಹಿಳೆ, 42 ವರ್ಷದ ಮಹಿಳೆ, 12 ವರ್ಷದ ಯುವತಿ, 23 ವರ್ಷದ ಯುವತಿ, 36 ಮತ್ತು 38 ವರ್ಷದ ಪುರುಷ, 42 ವರ್ಷದ ಮಹಿಳೆ, 46 ವರ್ಷದ ಪುರುಷ ಹೀಗೆ ಟೊಂಕ ಭಾಗದಲ್ಲೇ 14 ಕೇಸ್ ಇಂದು ದಾಖಲಾಗಿದೆ. ಉಳಿದಂತೆ ಕಾಸರಕೋಡಿನ 30 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version