ಜಿಲ್ಲೆಯಲ್ಲಿಂದು ಮೂರು ಸಾವು
107 ಮಂದಿ ಗುಣಮುಖರಾಗಿ ಬಿಡುಗಡೆ
ಸೋಂಕಿತರ ಸಂಖ್ಯೆ 4,180ಕ್ಕೆ ಏರಿಕೆ
ಕಾರವಾರ: ಉತ್ತರಕನ್ನಡದಲ್ಲಿ ಮಂಗಳವಾರ 136 ಕರೊನಾ ಪ್ರಕರಣ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಅಂಕೋಲಾದಲ್ಲಿ 32, ಹಳಿಯಾಳದಲ್ಲಿ 32, ಕಾರವಾರದಲ್ಲಿ 3, ಹೊನ್ನಾವರದಲ್ಲಿ 17, ಭಟ್ಕಳದಲ್ಲಿ 08, ಕುಮಟಾದಲ್ಲಿ 4, ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 7, ಮುಂಡಗೋಡಿನಲ್ಲಿ 21 ಮಂದಿಗೆ ಸೋಂಕು ದೃಢಪಟ್ಟಿದೆ.
ಇದೇ ವೇಳೆ, 107 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 1, ಕುಮಟಾದಲ್ಲಿ 32, ಹೊನ್ನಾವರದಲ್ಲಿ 14, ಭಟ್ಕಳದಲ್ಲಿ 10, ಶಿರಸಿಯಲ್ಲಿ 8, ಸಿದ್ದಾಪುರದಲ್ಲಿ 14, ಯಲ್ಲಾಪುರದಲ್ಲಿ 2, ಮುಂಡಗೋಡಿನಲ್ಲಿ 3, ಹಳಿಯಾಳದಲ್ಲಿ 32 ಹಾಗೂ ಜೋಯಿಡಾದಲ್ಲಿ ಓರ್ವ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿಂದು ಮೂವರ ಸಾವು:
ಇಂದು 136 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,180ಕ್ಕೆ ಏರಿಕೆಯಾಗಿದೆ. 3,197 ಮಂದಿ ಗುಣಮುಖರಾಗಿದ್ದಾರೆ. 939 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ, ಜಿಲ್ಲೆಯ ಕಾರವಾರ, ಭಟ್ಕಳ ಹಾಗೂ ಹಳಿಯಾಳದಲ್ಲಿ ಕರೊನಾದಿಂದ ಸಾವಾಗಿದೆ. ಇಂದು ಮೂವರು ಸೋಂಕಿಗೆ ಬಲಿಯಾದ ಬೆನ್ನಲ್ಲೆ, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 44ಕ್ಕೆ ಏರಿಕೆಯಾಗಿದೆ.
ಕುಮಟಾದಲ್ಲಿಂದು ಐದು ಕೇಸ್
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ಐದು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ಮಿರ್ಜಾನ್, ಕಡ್ಲೆ, ಹೊಸಳ್ಳಿ, ಮಂಜ್ಗುಣಿ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಮಿರ್ಜಾನಿನ 54 ವರ್ಷದ ಪುರುಷ, ಕಡ್ಲೆಯ 49 ವರ್ಷದ ಮಹಿಳೆ, ಕುಮಟಾದ 52 ವರ್ಷದ ಮಹಿಳೆ, ಮಂಜ್ಗುಣಿಯ 65 ವರ್ಷದ ಮಹಿಳೆ, ಹೊಸಳ್ಳಿಯ 70 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ , ಕುಮಟಾ