ಉತ್ತರಕನ್ನಡದಲ್ಲಿ ಇಂದು 198 ಕರೊನಾ ಕೇಸ್

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,517ಕ್ಕೆ ಏರಿಕೆ
111 ಮಂದಿ ಗುಣಮುಖರಾಗಿ ಬಿಡುಗಡೆ
ಸಾವಿನ ಸಂಖ್ಯೆ 48ಕ್ಕೆ ಏರಿಕೆ

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ 198 ಕರೊನಾ ಪ್ರಕರಣ ದಾಖಲಾಗಿದೆ. ಅಂಕೋಲಾದಲ್ಲಿ 14, ಕುಮಟಾದಲ್ಲಿ 18, ಕಾರವಾರದಲ್ಲಿ 12, ಹೊನ್ನಾವರದಲ್ಲಿ 18, ಸಿದ್ದಾಪುರದಲ್ಲಿ 13, ಯಲ್ಲಾಪುರದಲ್ಲಿ 12, ಜೊಯಿಡಾದಲ್ಲಿ 11 , ಭಟ್ಕಳದಲ್ಲಿ 22, ಶಿರಸಿಯಲ್ಲಿ 16, ಹಳಿಯಾಳದಲ್ಲಿ 57 , ಮುಂಡಗೋಡಿನಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ.


ಇದೇ ವೇಳೆ, ಜಿಲ್ಲೆಯಾದ್ಯಂತ ವಿವಿಧ ಆಸ್ಪತ್ರೆಯಿಂದ 111 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹೊನ್ನಾವರದಲ್ಲಿ 1, ಶಿರಸಿಯಲ್ಲಿ 34, ಕಾರವಾರದಲ್ಲಿ 30, ಸಿದ್ದಾಪುರದಲ್ಲಿ 15, ಹಳಿಯಾಳದಲ್ಲಿ 25 , ಅಂಕೋಲಾದಲ್ಲಿ 6 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 198 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯ ಸೋಂಕಿತರ ಸಂಖ್ಯೆ 4,517ಕ್ಕೆ ಏರಿಕೆಯಾಗಿದೆ. 3,346 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿಂದು ಮೂವರ ಸಾವು:

ಹಳಿಯಾಳ ಹಾಗೂ ಮುಂಡಗೋಡ, ಕಾರವಾರದಲ್ಲಿ ತಲಾ ಓರ್ವ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 48ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version