ಉತ್ತರ ಕನ್ನಡದಲ್ಲಿ ಇಂದು 214 ಕರೊನಾ ಕೇಸ್ ದೃಢ

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 214 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್‌ನಲ್ಲಿ ದಾಖಲಾದಂತೆ ಕಾರವಾರ 10, ಅಂಕೋಲಾ 17, ಕುಮಟಾ 37, ಹೊನ್ನಾವರ 32, ಭಟ್ಕಳ 6, ಶಿರಸಿ 62, ಸಿದ್ದಾಪುರ 5, ಯಲ್ಲಾಪುರ 7, ಮುಂಡಗೋಡ 1 ಮತ್ತು ಹಳಿಯಾಳದಲ್ಲಿ 27 ಕೇಸ್ ದೃಢಪಟ್ಟಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 52 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕುಮಟಾ 5, ಹೊನ್ನಾವರ 6, ಶಿರಸಿ 2, ಸಿದ್ದಾಪುರ 7, ಮುಂಡಗೋಡ 6, ಹಳಿಯಾಳದಲ್ಲಿ 26 ಮಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು ನಾಲ್ವರ ಸಾವು:

ಜಿಲ್ಲೆಯಲ್ಲಿ ಇಂದು ನಾಲ್ವರ ಸಾವಾಗಿದ್ದು, ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಹೊನ್ನಾವರದಲ್ಲಿ 2, ಶಿರಸಿ 1 ಮತ್ತು ಹಳಿಯಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇಂದು 214 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,774ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 25 ಕೇಸ್ ದೃಢ:

ಹೊನ್ನಾವರ: ತಾಲೂಕಿನಲ್ಲಿ ಇಂದು 25 ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಪಟ್ಟಣದಲ್ಲಿ 11 ಪ್ರಕರಣ ದಾಖಲಾದರೆ, ಗ್ರಾಮೀಣ ಭಾಗದಲ್ಲಿ 14 ಪ್ರಕರಣ ದೃಢಪಟ್ಟಿದೆ. ಹಳದೀಪುರದಲ್ಲಿಯೆ 7 ಪ್ರಕರಣ ಕಾಣಿಸಿಕೊಂಡಿದೆ.

ಹೊನ್ನಾವರ ಪಟ್ಟದ ಪ್ರಭಾತನಗರ,ಗಾಂಧಿನಗರ,, ದುರ್ಗಾಕೇರಿ, ಉದ್ಯಮನಗರ ಸೇರಿ ಪಟ್ಟಣ ವ್ಯಾಪ್ತಿಯಲ್ಲಿ 11 ಜನರಲ್ಲಿ ಕರೋನಾ ಪತ್ತೆಯಾಗಿದೆ. ಗ್ರಾಮೀಣ ಭಾಗವಾದ ಹಳದಿಪುರದಲ್ಲಿ-7, ಮಂಕಿಯಲ್ಲಿ-2, ಬಳ್ಕೂರ ತಲಗೋಡ-1, ಚಂದಾವರ-1, ಹೊದ್ಕೆಶಿರೂರ-1., ಹಡಿನಬಾಳ-1 ಕೇಸ್ ದೃಢಪಟ್ಟಿದೆ.

ಪಟ್ಟಣದ ಪ್ರಭಾತನಗರದ 37 ವರ್ಷದ ಪುರುಷ, 38 ವರ್ಷದ ಪುರುಷ, ಗಾಂಧಿನಗರದ 16 ವರ್ಷದ ಯುವತಿ, ದುರ್ಗಾಕೇರಿಯ 15 ವರ್ಷದ ಬಾಲಕ, 36 ವರ್ಷದ ಮಹಿಳೆ, ಉದ್ಯಮನಗರದ 18 ವರ್ಷದ ಯುವಕ, ರಥಬೀದಿಯ 54 ವರ್ಷದ ಪುರುಷ, 19 ವರ್ಷದ ಯುವಕ, 52 ವರ್ಷದ ಮಹಿಳೆ, 17 ವರ್ಷದ ಯುವತಿ, ತಾಲೂಕಾ ಆಸ್ಪತ್ರೆ ಕ್ವಾರ್ಟರ್ಸ್ನ 53 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗ್ರಾಮೀಣ ಭಾಗವಾದ ಹಳದಿಪುರದ 23 ವರ್ಷದ ಯುವಕ, 28 ವರ್ಷದ 52 ವರ್ಷದ ಮಹಿಳೆ, ಹಳದೀಪುರ ಕುಂಬಾರಕೇರಿಯ 43 ವರ್ಷದ ಪುರುಷ, 5 ವರ್ಷದ ಬಾಲಕ, 59 ವರ್ಷದ ಪುರುಷ, 39 ವರ್ಷದ ಮಹಿಳೆ, ಚಂದಾವರದ 57 ವರ್ಷದ ಪುರುಷ, ಹೊದ್ಕೆಶಿರೂರಿನ 70 ವರ್ಷದ ಮಹಿಳೆ, ಹಡಿನಬಾಳದ 31 ವರ್ಷದ ಯುವಕ ಸೇರಿ ಒಟ್ಟು 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ತಾಲೂಕಾ ಆಸ್ಪತ್ರೆಯಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದು, 17 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮನೆಯಲ್ಲಿ 230 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version