ಉತ್ತರಕನ್ನಡದಲ್ಲಿ ಇಂದು 28 ಕೇಸ್ ದಾಖಲು
ಹೊನ್ನಾವರ 8, ಕುಮಟಾದಲ್ಲಿ ಏಳು ಕೇಸ್
ಅಂಕೋಲಾದಲ್ಲಿ ನಾಲ್ಕು ಪಾಸಿಟಿವ್
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ಏಳು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ತಾಲೂಕಿನ ದಿವಗಿ, ಗಂಗೆಕೋಳ್ಳ, ರ‍್ಮುಡಿ, ಹುಬ್ಬಣಗೇರಿ, ಅಳ್ವೇಕೊಡಿ ಭಾಗದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.
ದಿವಗಿಯ 80 ವರ್ಷದ ವೃದ್ಧೆ, ಗಂಗೆಕೋಡ್ಲದ 30 ವರ್ಷದ ಮಹಿಳೆ, ರ‍್ಮುಡಿಯ 65 ವರ್ಷದ ವೃದ್ಧೆ, 25 ವರ್ಷದ ಯುವತಿ, 34 ವರ್ಷದ ಮಹಿಳೆ, ಹುಬ್ಬಣಗೇರಿಯ 16 ವರ್ಷದ ಬಾಲಕ ಮತ್ತು ಅಳ್ವೆಕೋಡಿಯ 19 ವರ್ಷದ ಯುವತಿಗೆ ಸೋಂಕು ತಗುಲಿದೆ. ಇಂದು 7 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1701 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 8 ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು 8 ಜನರಲ್ಲಿ ಕರೊನಾ ದೃಢಪಟ್ಟಿದೆ. ಪಟ್ಟಣವ್ಯಾಪ್ತಿಯಲ್ಲಿ 3, ಗ್ರಾಮೀಣ ಭಾಗದಲ್ಲಿ 5 ಕೇಸ್ ದಾಖಲಾಗಿದೆ. ಹೊನ್ನಾವರ ಪಟ್ಟಣದ 52 ವರ್ಷದ ಪುರುಷ, 20 ವರ್ಷದ ಯುವತಿ, 15 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.
ಗ್ರಾಮೀಣ ಭಾಗವಾದ ಮಾವಿನಕುರ್ವಾದ 25 ವರ್ಷದ ಯುವತಿ, 3 ವರ್ಷದ ಮಗು, ಮಂಕಿಯ 36 ವರ್ಷದ ಪುರುಷ, ಖರ್ವಾದ 46 ವರ್ಷದ ಪುರುಷ, ತಲಗೋಡಿನ 42 ವರ್ಷದ ಪುರುಷ ಸೇರಿದಂತೆ ಇಂದು ಒಟ್ಟೂ 8 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಅಂಕೋಲಾದಲ್ಲಿಂದು 4 ಕೊವಿಡ್ ಕೇಸ್ : ಗುಣಮುಖ 7
ಅಂಕೋಲಾ : ಮಂಗಳವಾರ ತಾಲೂಕಿನಲ್ಲಿ 4 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದೆ. ತಾಲೂಕಿನ ಗಡಿ ಪ್ರದೇಶವಾದ ಬ್ರಹ್ಮೂರು-ಕಬಗಾಲ ವ್ಯಾಪ್ತಿಯ 56 ರ ಮಹಿಳೆ, 3ರ ಪುಟಾಣಿ ಬಾಲೆ, 7 ರ ಬಾಲಕ ಹಾಗೂ ಬೆಳಸೆ ವ್ಯಾಪ್ತಿಯ 42ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ.
ಗುಣಮುಖರಾದ 7 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ಲ್ಲಿರುವ 28 ಮಂದಿ ಸಹಿತ ಒಟ್ಟೂ 45 ಸಕ್ರಿಯ ಪ್ರಕರಣಗಳಿವೆ.
ಉತ್ತರಕನ್ನಡದಲ್ಲಿ ಇಂದು 28 ಕೇಸ್ ದಾಖಲು
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಇಂದು 28 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,752,ಕ್ಕೆ ಏರಿಕೆಯಾಗಿದೆ. 799 ಸಕ್ರೀಯ ಪ್ರಕರಣಗಳಿದ್ದು, 276 ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ, ಹಾಗು ವಿಲಾಸ್ ನಾಯಕ ಅಂಕೋಲಾ