ತಂಜಾವೂರು: 55 ಅಡಿ ಎತ್ತರದ ತೆಂಗಿನ ಮರದಲ್ಲಿ ವ್ಯಕ್ತಿಯೊಬ್ಬರು ನಿದ್ದೆಗೆ ಜಾರಿದ ಪ್ರಸಂಗ ನಡೆದಿದೆ. ತೆಂಗಿನಕಾಯಿಯನ್ನು ಕೊಯ್ಯಲು ಮರವೇರಿದ ವ್ಯಕ್ತಿ ನಿದ್ದೆ ಮಾಡುತ್ತಿದ್ದರಿಂದ ಭೀತಿಗೊಂಡ ಗ್ರಾಮಸ್ಥರು ಎಲ್ಲಿ ಬಿದ್ದುಬಿಡುತ್ತಾರೆಯೋ ಎಂದು ಭಯದಿಂದ ಕೂಗಿ ಶಬ್ದ ಮಾಡಿ ನಿದ್ದೆಯಿಂದ ಎಚ್ಚರಿಸಲು ನೋಡಿದರು. ಏನೇ ಮಾಡಿದರೂ ಆತ ಮಾತ ಅಲ್ಲೆ ನಿದ್ರೆಗೆ ಜಾರಿದ್ದ. ಹೀಗಾಗಿ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ತಂಜಾವೂರು ಪಶ್ಚಿಮ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ಮರದಿಂದ ಇಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮರಕ್ಕೆ ಏಣಿ ಇಟ್ಟು ಹತ್ತಿ ವ್ಯಕ್ತಿಯನ್ನು ನಿದ್ದೆಯಿಂದ ಎಬ್ಬಿಸಿದರು. ನಿದ್ದೆಯಿಂದ ಎಚ್ಚರಗೊಂಡ ಲೋಕನಾಥನ್ ಏಣಿಯ ಸಹಾಯದಿಂದ ಇಳಿಯಲು ಇಚ್ಚಿಸದೆ ತಾನಾಗಿಯೇ ಮರದಿಂದ ಇಳಿಯುತ್ತೇನೆ ಎಂದು ಹಠ ಹಿಡಿದು, ಇಳಿದುಬಂದ . ಪೊಲೀಸರು ಹೀಗ್ಯಾಕೆ ಮಾಡಿದ್ದೀಯಾ ಎಂದು ಕೇಳಿದ್ರೆ, ತಾನು ಮರ ಹತ್ತಿದ ಮೇಲೆ ತೀರಾ ಸುಸ್ತಾಗಿ ಆಯಾಸದಿಂದ ನಿದ್ದೆ ಹೋದೆ ಎಂದು ಉತ್ತರಿಸಿದ. ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಇನ್ನೆಂದೂ ಹೀಗೆ ಮಾಡದಂತೆ ತೆಂಗಿನ ಮರ ಹತ್ತುವಾಗ ಎಚ್ಚರಿಕೆಯಿಂದ ಇರುವಂತೆ ಬುದ್ದಿ ಹೇಳಿ ಕಳುಹಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್