ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದಲ್ಲಿ ರಾರಾಜಿಸುತ್ತಿರುವ ಗ್ರಾಮ ದೇವತೆಯಾದ ಶ್ರೀ ದುರ್ಗಾಂಬಾ ದೇವಸ್ಥಾನ, ಬಹು ಪುರಾತನ ಕಾಲದಿಂದಲೂ ಪ್ರಸಿದ್ಧ ಜಾಗೃತ ಸ್ಥಾನವಾಗಿದೆ. ಜಗನ್ಮಾತೆ ಶ್ರೀ ದುಗಾಂಬದೇವಿ ತನ್ನೆಲ್ಲ ಪರಿವಾರ ದೇವತೆಗಳೊಂದಿಗೆ ತನ್ನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸುತ್ತಿರುವುದು ಭಕ್ತರ ಮನ ಮನೆಗಳಲ್ಲಿ ಹಾಸು ಹೊಕ್ಕಾಗಿರುವ ವಿಷಯವಾಗಿದೆ.
ಶ್ರೀ ದೇವಿ ಅನುಗ್ರಹ, ಭಕ್ತಾಧಿಗಳ ಅಪೇಕ್ಷೆಯಂತೆ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ, ಫೆಬ್ರವರಿ 6ರ ಗುರುವಾರದಿಂದ ಫೆಬ್ರವರಿ 8ರ ಶನಿವಾರದವರೆಗೆ ಮೂರುದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ದೇವಾಲಯದ ಕಟ್ಟಡ ಮತ್ತು ಜಗನ್ಮಾತೆಯ ನೂತನ ಮೂರ್ತಿಯ ಪುನಃ ಪ್ರತಿಷ್ಠೆಯೊಂದಿಗೆ ಅಷ್ಠಬಂಧ, ಚಂಡಿಹವನ ಮುಂತಾದ ಧಾರ್ಮಿಕಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರು ಶ್ರೀ ದೇವರಿಗೆ ವಿಶೇಷ ಸೇವೆ ಸಲ್ಲಿಸಿ ಕೃತಾರ್ಥರಾದರು.