Uttara Kannada
Trending

ಉತ್ತರಕನ್ನಡದಲ್ಲಿ ಇಂದು 142 ಕೋವಿಡ್ ಕೇಸ್: ಮೂವರ ಸಾವು: 119 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 142 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರದಲ್ಲಿ ಅತಿಹೆಚ್ಚು ಅಂದರೆ 28 ಪ್ರಕರಣ ದೃಢಪಟ್ಟಿದೆ. ಉಳಿದಂತೆ ಅಂಕೋಲಾ 18, ಕುಮಟಾ 9, ಹೊನ್ನಾವರ 9, ಭಟ್ಕಳ 8, ಶಿರಸಿ 16, ಸಿದ್ದಾಪುರ 6, ಯಲ್ಲಾಪುರ 6, ಮುಂಡಗೋಡ 27, ಹಳಿಯಾಳ 12, ಮತ್ತು ಜೋಯ್ಡಾದಲ್ಲಿ 5 ಕೇಸ್ ಕಾಣಿಸಿಕೊಂಡಿದೆ.

ಇದೇ ವೇಳೆ ಇಂದು ಜಿಲ್ಲೆಯಾದ್ಯಂತ ಮೂವರು ಸಾವನ್ನಪ್ಪಿದ್ದಾರೆ. ಅಂಕೋಲಾ 1, ಶಿರಸಿ 1 ಮತ್ತು ಹಳಿಯಾಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 208ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ, ಜಿಲ್ಲೆಯಲ್ಲಿ ಇಂದು ವಿವಿಧ ಆಸ್ಪತ್ರೆಯಿಂದ 119 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button