ಗೋಕರ್ಣದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಭಕ್ತರಿಗೆ ದರ್ಶನ

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಎಲ್ಲಾ ಬೇಕಾದ ತಯಾರಿಗಳನ್ನು ಮಾಡಿಕೊಂಡು ದರ್ಶನಕ್ಕೆ ಅವಕಾಶವನ್ನು ಕೇವಲ ನಂದಿ ಮಂಟಪದವರೆಗೆ ಮಾಡಲಾಗಿದೆ. ಈ ಸವಲತ್ತು ಇನ್ನು 15 ದಿನಗಳವರೆಗೆ ಊರಿನವರಿಗೆ ಮಾತ್ರ ಇಂದು ಬೆಳಿಗ್ಗೆ ಊರಿನವರು ಸಾಲುಸಾಲಾಗಿ ಬಂದು ದರ್ಶನವನ್ನು ಮಾಡಿ ಹೋಗುತ್ತಿದ್ದಾರೆ. ಪ್ರವೇಶವಾಗುವ ಬಾಗಿಲಿನಲ್ಲಿ “Infrared Thermometer” ಸಾಧನದ ಮುಖಾಂತರ ಭಕ್ತಾದಿಗಳ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿ ಕೈಗೆ “ಸನಿಟೈಜರ” ಹಾಕಿ ಒಳಗೆ ಬಿಡಲಾಗುವುದು. ಕರ್ನಾಟಕ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿಯಾದ ಶ್ರೀ ಕೆ. ಪಿ. ಮೋಹನ್ ರಾಜ  ಅವರು ದೇವಸ್ಥಾನದ ದರ್ಶನದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮತ್ತು 15 ದಿನಗಳ ಕಾಲ ಊರಿನವರಿಗೆ ಮಾತ್ರ ಬಿಡುತ್ತಿರುವ ಕ್ರಮಗಳನ್ನು ಪ್ರಶಂಸಿಸಿದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಟ್ಟುನಿಟ್ಟಾಗಿ ವ್ಯವಸ್ಥೆ ರೂಪಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತಾಧಿಕಾರಿಯಾದ ಶ್ರೀ ಜಿ ಕೆ ಹೆಗಡೆ, ತಹಸಿಲ್ಧಾರ ಮೇಘರಾಜ ನಾಯ್ಕ ಮತ್ತು ಅವರ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

Exit mobile version