ಉತ್ತರ ಕನ್ನಡದಲ್ಲಿಂದು 117 ಕರೊನಾ ಕೇಸ್ ದಾಖಲು

86 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸಾವಿನ‌ ಸಂಖ್ಯೆ 80ಕ್ಕೆ ಏರಿಕೆ
ಸೆಪ್ಟೆಂಬರ್ 14 ರಿಂದ ಮಂಜಗುಣಿ ದೇವಸ್ಥಾನದಲ್ಲಿ ಭಕ್ತರ ಸೇವೆಗೆ ಅವಕಾಶ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 117 ಕರೊನಾ‌ ಕೇಸ್ ದಾಖಲಾಗಿದೆ. ಇಂದಿನ‌ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 14,ಅಂಕೋಲಾ 10, ಕುಮಟಾ 12,ಹೊನ್ನಾವರ 9, ಭಟ್ಕಳ 22, ಸಿದ್ದಾಪುರ‌ 5, ಶಿರಸಿ‌ 25,ಯಲ್ಲಾಪುರ 11, ಹಳಿಯಾಳ 8 ಮತ್ತು ಜೋಯ್ಡಾದಲ್ಲಿ ಒಂದು ಪ್ರಕರಣ‌ ದಾಖಲಾಗಿದೆ.

ಇದೇ ವೇಳೆ 86 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾ 6, ಅಂಕೋಲಾ 4,ಕುಮಟಾ‌ 25, ಹೊನ್ನಾವರ 17, ಭಟ್ಕಳ 17, ಹಳಿಯಾಳದಲ್ಲಿ 16 ಮಂದಿ ಬಿಡುಗಡೆಯಾಗಿದ್ದಾರೆ‌.

ಮೃತರ‌ ಸಂಖ್ಯೆ 80ಕ್ಕೆ ಏರಿಕೆ

ಜಿಲ್ಲೆಯ ಅಂಕೋಲಾದಲ್ಲಿ ಇಂದು ಒಂದು ಸಾವಾಗಿದ್ದು, ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೆ‌ ಏರಿಕೆಯಾಗಿದೆ.
ಇಂದು 117 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ‌ ಸೋಂಕಿತರ ಸಂಖ್ಯೆ 6,804ಕ್ಕೆ ಏರಿಕೆಯಾಗಿದೆ.

ಸೆಪ್ಟೆಂಬರ್ 14 ರಿಂದ ಮಂಜಗುಣಿ ದೇವಸ್ಥಾನದಲ್ಲಿ ಭಕ್ತರ ಸೇವೆಗೆ ಅವಕಾಶ

ಶಿರಸಿ: ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೆ.14ರಿಂದ ನಿತ್ಯದ ಎಲ್ಲ ಸೇವೆಗಳಿಗೂ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.


ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಸರ್ಕಾರದ ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಇಂದಿನ ಪ್ರಮುಖ‌ ಸುದ್ದಿಗಳು

Exit mobile version