Uttara Kannada
Trending

ಅಪ್ರಾಪ್ತ ಬಾಲಕಿಯೊಂದಿಗೆ ಮದುವೆ ಸಿದ್ಧತೆ, ಬಾಲ್ಯವಿವಾಹವನ್ನು ತಡೆದ ಅಧಿಕಾರಿಗಳು

ಭಟ್ಕಳ : ಖಚಿತ ಮಾಹಿತಿ ಮೇರೆಗೆ ಯಲ್ವಡಿಕವೂರ ಪಂಚಾಯಿತಿ ವ್ಯಾಪ್ತಿಯ ಪುರವರ್ಗದಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ವಿವಾಹವನ್ನು ತಡೆದು, ಪಾಲಕರಿಗೆ ಎಚ್ಚರಿಗೆ ನೀಡಿ ಬಳಿಕ ಮುಚ್ಚಳಿಕೆ ಬರೆಸಿಕೊಂಡ ಘಟನೆ ತಾಲೂಕಿನ ನಡೆದಿದೆ.

ಡಿ 27ರಂದು 24 ವರ್ಷದ ಯುವಕನ ಜೊತೆ ಅಪ್ರಾಪ್ರ ಯುವತಿಯೋರ್ವಳ ಮದುವೆ ನಡೆಸಲು ತಯಾರಿ ನಡೆಯುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿ ಗಂಗಾ ಗೌಡ, ಕುಸುಮಾ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಶಾರದಾ, ನಗರ ಠಾಣೆಯ ಪಿಎಸ್‍ಐ ಕುಡಗಂಟಿ ಸ್ಥಳಕ್ಕೆ ತೆರಳಿದ್ದಾರೆ. ದಾಖಲೆ ಪ್ರಕಾರ ಬಾಲಕಿಯ ವಯಸ್ಸು ಇನ್ನು 16 ದಾಟದ ಕಾರಣ ನಡೆಯುತ್ತಿದ್ದ ವಿವಾಹವನ್ನು ತಡೆದಿದ್ದಾರೆ. ಅಲ್ಲದೆ ಬಾಲಕಿಗೆ 18 ವರ್ಷ ತುಂಬದ ಕಾರಣ ಇದು ಬಾಲ್ಯವಿವಾಹವಾಗುತ್ತಿದ್ದು ಇದು ಅಪರಾಧ ಎಂದು ಹೇಳಿದ್ದಾರೆ.

ತಮಗೆ ಬಾಲ್ಯವಿವಾಹದ ಕುರಿತು ಅರಿವು ಇಲ್ಲದೆ ಈ ವಿವಾಹಕ್ಕೆ ಮುಂದಾಗಿದ್ದೇವು. ಬಾಲಕಿಗೆ 18 ತುಂಬುವವರೆಗೂ ಈ ವಿವಾಹ ಮಾಡುವದಿಲ್ಲ ಎಂದು ಬಾಲಕಿಯ ತಾಯಿ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಬಾಲಕಿಗೆ 18 ತುಂಬಿದ ಬಳಿಕ ತಮ್ಮ ಅನುಮತಿ ಪಡೆದು ವಿವಾಹ ಮಾಡುವದಾಗಿ ತಿಳಿಸಿದ್ದು.ಭಾನುವಾರ ನಡೆಯಬೇಕಿದ್ದ ವಿವಾಹವನ್ನು ಮುಂದೂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button