Join Our

WhatsApp Group
Uttara Kannada
Trending

ಬಾಸಗೋಡದ ಭಾಗೀರಥಿ ನಾಯಕ ವಿಧಿವಶ

ಸೂರ್ವೆಯ ಮನೆಮಗಳು
ನಿವೃತ್ತ ಅಂಗನವಾಡಿ ಮೇಲ್ವಿಚಾರಕಿ

ಅಂಕೋಲಾ : ಬಾಸಗೋಡದ ಭಾಗೀರಥಿ ಎಸ್.ನಾಯಕ (66)ಸ್ವಗೃಹದಲ್ಲಿ ಭಾನುವಾರ ರಾತ್ರಿ ವಿಧಿವಶ ರಾಗಿದ್ದು, ಅವರು ವರ್ಷದಿಂದೀಚೆಗೆ ತೀವೃ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಭಾಗೀರಥಿ ನಾಯಕ ಈ ಹಿಂದೆ ಮಂಗಳೂರಿನ ಬಂಟ್ವಾಳ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಹೊನ್ನಾವರದ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿಯಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಊರವರು ಸೇರಿದಂತೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಉತ್ತಮ ಬಾಂಧವ್ಯ ಹೊಂದಿದ್ದರು.

ಸೂರ್ವೆ ಗ್ರಾಮದ ಸುಸಂಸ್ಕøತ ಕುಟುಂಬದಲ್ಲಿ ಜನಿಸಿದ್ದ(15.01.1955)ಭಾಗೀರಥಿ ನಾಯಕ ಬಾಸಗೋಡ ಗ್ರಾಮದ ವೆಂಕಟ್ರಮಣ ಆರ್.ನಾಯಕ ಇವರೊಂದಿಗೆ ವಿವಾಹವಾಗಿ, ಸದ್ಗ್ರಹಿಣ ಯಾಗಿ ಕುಟುಂಬ ನಿರ್ವ ಹಿಸುತ್ತಿದ್ದರು. ಮೃತರು, ಪತಿ ವಿ.ಆರ್.ನಾಯಕ (ವೆಂಟು), ಹಿರಿಯ ಮಗ ಲೋಹಿತ್(ಗಜು), ಸೊಸೆ ಕೃಪಾ ನಾಯಕ, ಮೊಮ್ಮಗ ಅಗಸ್ತ್ಯ, ಮಕ್ಕಳಾದ ಬಿ.ವಿ.ವಿಶಾಲ(ವಿಜು), ದರ್ಶನಕುಮಾರ (ಕಿಟ್ಟು) ಸೇರಿ ದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಸೋಮವಾರ ಬೆಳಿಗ್ಗೆ ನೆರವೇರಿಸಲಾಯಿತು. ಬಾಸಗೋಡ, ಸೂರ್ವೆ ಗ್ರಾಮಸ್ಥರು, ಬಂಧುಗಳು ಮತ್ತು ಕುಟುಂಬದ ಆಪ್ತರು, ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯ್ಕ ಅಂಕೋಲಾ

Back to top button