Special
Trending

31 ಬಾರಿ ಕರೊನಾ ಪಾಸಿಟಿವ್: ವೈದ್ಯಲೋಕಕ್ಕೆ ಸವಾಲು ಈ ಮಹಿಳೆ

17 ಆರ್‌ಟಿಪಿಸಿಆರ್ ಹಾಗು 14 ಆ್ಯಂಟಿಜನ್ ಟೆಸ್ಟ್
ಐದು ತಿಂಗಳಲ್ಲಿ 31 ಬಾರಿ ಕರೊನಾ ಪಾಸಿಟಿವ್

ಈ ಮಹಿಳೆಗೆ ಕಳೆದ ಐದು ತಿಂಗಳಿನಲ್ಲಿ ಬರೊಬ್ಬರಿ 31 ಬಾರಿ ಕರೊನಾ ಪಾಸಿಟಿವ್ ಬಂದಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದಾಳೆ. ರಾಜಸ್ತಾನದ ಭರತ್‌ಪುರದ ಮಹಿಳೆಗೆ ಇದುವೆರೆಗೂ 17 ಆರ್‌ಟಿಪಿಸಿಆರ್ ಹಾಗು 14 ಆಂಟಿಜನ್ ಟೆಸ್ಟ್ ಮಾಡಿದ್ದು, ಈ ಎಲ್ಲಾ ಟೆಸ್ಟ್ ನಲ್ಲೂ ಪಾಸಿಟಿವ್ ಬಂದಿದೆ. ಈ ಮಹಿಳೆಗೆ ಅಲೋಪತಿ, ಆಯುರ್ವೇದ, ಹೋಮಿಯೋಪತಿ ಹೀಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದೆ. ಆದರೂ ಇನ್ನೂ ನೆಗೆಟಿವ್ ಬಂದಿಲ್ಲ. ಅಚ್ಚರಿ ವಿಷಯ ಅಂದ್ರೆ ಈಕೆಗೆ ಕರೊನಾ ಪಾಸಿಟಿವ್ ಇದ್ದರೂ ಆರೋಗ್ಯವಾಗಿದ್ದಾಳೆ ಮತ್ತು ದೌರ್ಬಲ್ಯದ ಲಕ್ಷಣಗಳನ್ನು ಹೊಂದಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button