Special
Trending

ವಿಶ್ವದ ದುಬಾರಿ ಸೋಪ್! ಇದರ ಬೆಲೆ 2 ಲಕ್ಷಕ್ಕೂ ಅಧಿಕ

ಇದಕ್ಕೆ ಬಳಸಿದ ವಸ್ತುಗಳನ್ನು ಕೇಳಿದ್ರೆ ಶಾಕ್ ಆಗ್ತಿರ
ಜನಸಾಮಾನ್ಯರ ತಲೆ ತಿರುಗೋದಂತು ಗ್ಯಾರಂಟಿ

ಸ್ನಾನಕ್ಕೆ ಬಳಸುವ ಸೋಪ್‌ಗಳ ಬೆಲೆ ಎಷ್ಟಿರಬಹುದು? 100, 200 ರೂ., ಹೆಚ್ಚೆಂದ್ರೆ 1 ಸಾವಿರ ರೂಪಾಯಿ.. ಆದ್ರೆ, ಈ ಸ್ನಾನದ ಸೋಪಿನ ಬೆಲೆ ಕೇಳಿದ್ರೆ ನೀವು ಆಶ್ಚರ್ಯದ ಜೊತೆ ಶಾಕ್ ಆಗುವುದು ಖಚಿತ. ಹೌದು, ಈ ಸೋಪಿನ ಬೆಲೆ ಬರೋಬ್ಬರಿ 2 ಲಕ್ಷ..! ಅಯ್ಯೋ, ಇದೇನಿದು? ಸ್ನಾನಕ್ಕೆ ಬಳಸುವ ಸೋಪಿನ ಬೆಲೆ ಇಷ್ಟಿರಲು ಹೇಗೆ ಸಾಧ್ಯ ಅಂತ ನೀವು ಯೋಚಿಸುತ್ತಿರಬಹುದು. ಇದರಲ್ಲೇನು ವಿಶೇಷವಿದೆ ಇದೆ ಅಂತೀರಾ? ಈ ಸೋಪನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದೊಂದು ದುಬೈನ ಹ್ಯಾಂಡ್ ಮೇಡ್ ಸಾಬೂನಾಗಿದ್ದು, ದುಬೈನ ಬ್ಯಾಡರ್ ಆಂಡ್ ಸನ್ಸ್ ಕಂಪೆನಿ ವಿಶೇಷ ವಸ್ತುಗಳನ್ನು ಬಳಸಿ ತಯಾರಿಸಿದೆ.

ಹೌದು, ಈ ದುಬಾರಿ ಸಾಬೂನನ್ನು ಚಿನ್ನ ಮತ್ತು ವಜ್ರದ ಪುಡಿಯಿಂದ ತಯಾರಿಸಲಾಗಿದೆ ಅಂತ ಕಂಪೆನಿ ಹೇಳಿಕೊಂಡಿದೆ. 17 ಗ್ರಾಮ್ 24 ಕ್ಯಾರೆಟ್ ಗೋಲ್ಡ್, ಕೆಲವೇ ಗ್ರಾಂ ಡೈಮಂಡ್ ಪೌಡರ್, ವಿಶೇಷವಾದ ಜೇನು, ಪರಿಶುದ್ಧವಾದ ಆಲಿವ್ ಎಣ್ಣೆ ಮುಂತಾದ ವಿಶೇಷ ಪದಾರ್ಥಗಳನ್ನು ಬಳಸಿ, ಈ ಸೋಪನ್ನು ತಯಾರಿಸಲಾಗಿದೆ. ಈ ವಿಶೇಷ ಉತ್ಪನ್ನಗಳು ಕೇವಲ ವಿಶೇಷ ವ್ಯಕ್ತಿಗಳು ಮತ್ತು ಗಣ್ಯರಿಗೆ ಮಾತ್ರ ಮಾಡಲ್ಪಟ್ಟಿದೆ. ದುಬೈ ಮತ್ತು ಯುಎಇಯ ಪ್ರಮುಖವಾದ ಸ್ಟೋರ್‌ಗಳಲ್ಲಿ ಮಾತ್ರ ಇವುಗಳನ್ನು ಖರೀದಿಸಬಹುದು.

ಈ ಸೋಪನ್ನು ಸುಮಾರು 15ನೇ ಶತಮಾನದಿಂದಲೂ ದುಬೈನ ಕುಟುಂಬವೊoದು ತಯಾರಿಸುತ್ತಿದೆ. ಇದಲ್ಲದೆ, ಸ್ವಾಭಾವಿಕ ಸುಗಂಧದ್ರವ್ಯ ಸೇರಿದಂತೆ ಅನೇಕ ರಕ್ಷಕ ಉತ್ಪನ್ನಗಳನ್ನು ಕಂಪೆನಿ ತಯಾರಿಸುತ್ತಾ ಬಂದಿದೆ. ಆದ್ರೆ, ಈ ಸೋಪಿನ ಬೆಲೆ ಕೇಳಿ, ಜನಸಾಮಾನ್ಯರ ತಲೆ ತಿರುಗೋದಂತು ಗ್ಯಾರಂಟಿ.!

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]

Back to top button