Big News
Trending

ಊರಿಗೆ ಕೋವಿಡ್ ಬರದಂತೆ ನೋಡಿಕೊಂಡ ಗ್ರಾಮಸ್ಥರು: ದೇಶಕ್ಕೆ ಮಾದರಿ ಈ ಹಳ್ಳಿ: ಹೆಮ್ಮಾರಿ ತಡೆಗಟ್ಟಿದ್ದು ಹೇಗೆ ನೋಡಿ?

ಕಾರವಾರ: ಕೊರೊನಾ ಎರಡನೆ ಅಲೆ ಅಬ್ಬರ ಇಡೀ ರಾಷ್ಟ್ರವನ್ನೇ ನಲುಗಿಸಿದೆ. ಅದರಲ್ಲೂ ಈ ಬಾರಿ ಹಳ್ಳಿಗಳಲ್ಲೂ ಮಹಾಮಾರಿ ಅಟ್ಟಹಾಸ ಜೋರಾದ ಕಾರಣ ಸಾಕಷ್ಟು ಮಂದಿ ಬಲಿಯಾಗಿದ್ದಾರೆ. ಆದರೆ ಉತ್ತರಕನ್ನಡ ಜಿಲ್ಲೆಯ ಈ ಒಂದು ಗ್ರಾಮದಲ್ಲಿ ಮಾತ್ರ ಈವರೆಗೂ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಗ್ರಾಮಸ್ಥರೇ ಮುಂಜಾಗ್ರತೆ ವಹಿಸಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಕೊರೊನಾ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು ಈ ಕುರಿತು ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಇಡೀ ರಾಷ್ಟ್ರವೇ ಕಳೆದೆರಡು ವರ್ಷದಿಂದ ಕೊರೊನಾ ಅಟ್ಟಹಾಸಕ್ಕೆ ನಲುಗಿಹೋಗಿದೆ. ಕಳೆದ ಬಾರಿ ನಗರಗಳನ್ನು ಹೊಕ್ಕಿ ಅಟ್ಟಹಾಸ ಮೆರೆದಿದ್ದ ಮಹಾಮಾರಿ ಈ ಬಾರಿ ಹಳ್ಳಿಗಳಿಗೂ ನುಗ್ಗಿ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಈ ಬಾರಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚಳವಾಗಿದ್ದು ಜನರು ಬೆಚ್ಚಿ ಬೀಳುವಂತಾಗಿದೆ.

ಆದರೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಕೋಲೆರಂಗ ಗ್ರಾಮ ಮಾತ್ರ ಕೊರೊನಾ ಕಪಿಮುಷ್ಟಿಗೆ ಸಿಗದೇ ಈವರೆಗೂ ಸುರಕ್ಷಿತವಾಗಿದೆ. ಕೊರೊನಾ ಎರಡು ಅಲೆಯಲ್ಲೂ ಸಹ ಗ್ರಾಮದ ಯಾವೊಬ್ಬರಿಗೂ ಸೋಂಕು ಹತ್ತಿರಕ್ಕೂ ಸುಳಿದಿಲ್ಲ.

ಕೋಲೆರಂಗ ಗ್ರಾಮದಲ್ಲಿ ದನಗರ ಗೌಳಿ ಸಮುದಾಯದವರೇ ಇದ್ದು ಸುಮಾರು 250ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹೈನುಗಾರಿಕೆಯನ್ನು ಪ್ರಮುಖ ಕಸುಬನ್ನಾಗಿಸಿಕೊಂಡಿರುವ ಈ ಗ್ರಾಮದ ಜನರು ಕೊರೊನಾ ಎರಡನೇಯ ಅಲೆಯನ್ನು ಕಂಡು ಆತಂಕಕ್ಕೊಳಗಾಗಿದ್ದರು.

ಆದರೆ ಕೊರೊನಾ ಆರಂಭದಿoದಲೂ ಕೈಕಟ್ಟಿ ಕೂರದೇ ಗ್ರಾಮಕ್ಕೆ ತಮಗೆ ತಾವೇ ನಿರ್ಭಂದ ವಿಧಿಸಿಕೊಂಡು ಗ್ರಾಮದಿಂದ ಹೊರಹೋಗುವುದನ್ನು ಸ್ಥಗಿತಗೊಳಿಸಿದ್ರು. ಅಲ್ಲದೇ ಊರಿನ ಒಳಗೂ ಸಹ ಯಾರಿಗೂ ಪ್ರವೇಶ ನೀಡದ ಕಾರಣ ಗ್ರಾಮದ ಭಾಗವತಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಪತ್ತೆಯಾದರೂ ಸಹ ಕೋಲೆರಂಗ ಗ್ರಾಮಕ್ಕೆ ಸೋಂಕು ಹೊಕ್ಕದಂತೆ ನೋಡಿಕೊಳ್ಳುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ ಗ್ರಾಮದ ಅರ್ಜುನ್ ಎನ್ನುವವರು.

ಇನ್ನು ಉದ್ಯೋಗ ಅರಸಿ ಕೋಲೆರಂಗ ಗ್ರಾಮದಿಂದ ಹೊರಹೋಗುವವರ ಸಂಖ್ಯೆ ಕಡಿಮೆ ಇದ್ದು ಲಾಕ್ ಡೌನ್ ಇದ್ದಿದ್ದರಿಂದ ಹಾಲಿನ ವ್ಯಾಪಾರ ಸಹ ಇಲ್ಲವಾಗಿತ್ತು. ಹೀಗಾಗಿ ಯಾರೊಬ್ಬರೂ ಸಹ ಗ್ರಾಮದಿಂದ ಹೊರಕ್ಕೆ ಓಡಾಡುವ ಅಗತ್ಯತೆ ಇರಲಿಲ್ಲ.

ಇನ್ನು ಗ್ರಾಮದ ನಿವಾಸಿಗಳಿಗೆ ಅಗತ್ಯವಿದ್ದ ದಿನಸಿ, ದಿನಬಳಕೆ ವಸ್ತುಗಳನ್ನು ಪೂರೈಕೆ ಮಾಡಲು ಗ್ರಾಮದ ಇಬ್ಬರನ್ನು ನಿಯೋಜಿಸಿಕೊಂಡಿದ್ದು ಅವರೂ ಸಹ ಗ್ರಾಮಕ್ಕೆ ಬರದೇ ಹೊರಗಡೆಯೇ ಉಳಿದುಕೊಳ್ಳುತ್ತಿದ್ದರು. ಅಲ್ಲದೇ ಗ್ರಾಮದ ಸಂಬoಧಿಕರಿಗೂ ಸಹ ಎರಡು ತಿಂಗಳುಗಳ ಕಾಲ ಗ್ರಾಮಕ್ಕೇ ಬರದಂತೆ ತಿಳಿಸಿದ್ದು ಇದರಿಂದ ಗ್ರಾಮದಲ್ಲಿ ಒಂದೂ ಕೊರೊನಾ ಪ್ರಕರಣಗಳು ಇಲ್ಲದಂತಾಗಿದೆ.

ಅಲ್ಲದೇ ಬಹುತೇಕ ಗ್ರಾಮಸ್ಥರು ಇದೀಗ ಕೊರೊನಾ ಲಸಿಕೆಯನ್ನು ಸಹ ಪಡೆದುಕೊಂಡಿದ್ದು ಮೂರನೇ ಅಲೆ ಪ್ರಾರಂಭವಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಹ ಈಗಾಗಲೇ ಗ್ರಾಮಸ್ಥರು ಸೇರಿ ಚರ್ಚಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ವ್ಯಾಪಾರವಿಲ್ಲದೇ ಆರ್ಥಿಕ ತೊಂದರೆಯಾಗಿದ್ದರೂ ಸಹ ಗ್ರಾಮಸ್ಥರೇ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕೊರೊನಾ ನಿಭಾಯಿಸಿದ್ದು ಇದೀಗ ಕೊರೊನಾ ಕಡಿಮೆಯಾಗಿದ್ದರೂ ಸಹ ಮೈಮರೆಯೋದಿಲ್ಲ ಎನ್ನುತ್ತಾರೆ ಗ್ರಾಮದ ಇನ್ನೋರ್ವ ಯುವಕ ವಿಠಲ್.

ಒಟ್ಟಾರೇ ಕೊರೊನಾ ಮಹಾಮಾರಿ ಎಲ್ಲೆಡೆ ಅಟ್ಟಹಾಸ ಬೀರುತ್ತಿದ್ದರೂ ಸಹ ಕೋಲೆರಂಗ ಗ್ರಾಮದ ಜನ ಸೋಂಕನ್ನು ಹೊರಗಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ ಅಕ್ಷರಸ್ಥರಿಗಿಂತ ಹೆಚ್ಚಿನ ಮುಂಜಾಗ್ರತೆಯೊoದಿಗೆ ಸೋಂಕಿನಿoದ ಬಚಾವಾಗಿದ್ದು ಎಲ್ಲರಿಗೂ ಮಾದರಿ.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button