Important
Trending

ಬೈಕ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಹೊನ್ನಾವರ: ಕಳ್ಳತನವಾಗಿದ್ದ ಸ್ಕೂಟರ್ ಪ್ರಕರಣಕ್ಕೆ ಸಂಬoದಿಸಿದoತೆ ಸ್ಕೂಟರ್ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಖದಿಉಜಮಾ ಹಾಗೂ ಸಯ್ಯದ್ ಸನಾನ್, ಬಂಧಿತ ಆರೋಪಿಗಳು. ಕಳುವಾಗಿದ್ದ ಬೈಕ್ ಜೊತೆಗೆ ಇನ್ನೆರಡು ಸ್ಕೂಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಸ್ಮಾಯಿಲ್ ಎಂಬಾತ ತನ್ನ ಸ್ಕೂಟರ್ ಕಳುವಾಗಿದ್ದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.ಕಾರ್ಯಾಚರಣೆಗಿಳಿದಿದ್ದ ಹೊನ್ನಾವರ ಪೋಲಿಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button