Focus News
Trending

ಮನೆಯ ಛಾವಣಿ ಹೆಂಚಿನಡಿ ಸೇರಿದ್ದ ಬೃಹತ್ ಕಾಳಿಂಗ ಸರ್ಪ: 8 ಅಡಿ ಉದ್ದದ ಬೃಹತ್ ಕಾಳಿಂಗ ನೋಡಿ ಮನೆಯವರು ಕಂಗಾಲು

ಶಿರಸಿ: 8 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಮನೆಗೆ ಆಗಮಿಸಿತ್ತು. ಹೌದು, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಬೃಹತ್ ಕಾಳಿಂಗ ಸರ್ಪವನ್ನು ನೋಡಿ ಮನೆಯವರು ಆತಂಕಗೊoಡಿದ್ದರು. ಕೂಡಲೇ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.

ತಾಲೂಕಿನ ಸರನ್ಗದ್ದೆಯಲ್ಲಿ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ ಹುಲೇಕಲ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅತ್ಯಂತ ಸಾಹಸ ಮಯವಾಗಿ ಕಾರ್ಯಾಚರಣೆ ನಡೆಸಿ ಕಾಡಿಗೆ ಬಿಟ್ಟರು. ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್‌ಎಫ್‌ಓ ಮಂಜುನಾಥ ಹೆಬ್ಬಾರ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button